KAPC

ಕರ್ನಾಟಕ ಕೃಷಿ ಬೆಲೆ ಆಯೋಗ ಪ್ರಾಯೋಜಿತ “ರೈತರ ಆದಾಯ ಹಾಗೂ ಕಲ್ಯಾಣ ವೃದ್ಧಿ ಯೋಜನೆ”

ರೈತರು ತಮ್ಮ ಉತ್ಪನ್ನಗಳಿಗೆ ಸಿಗುವ ಅನಿಶ್ಚಿತ ಬೆಲೆಗಳಿಂದಾಗಿ ಯಾವಾಗಲೂ ಸಂಕಷ್ಟಕ್ಕೆ ಈಡಾಗುತ್ತಾರೆ. ಇದರಿಂದ ಹೆಚ್ಚಿನ ಸಂದರ್ಭಗಳಲ್ಲಿ ಕೃಷಿಗೆ ತೊಡಗಿಸಿದ ಉತ್ಪಾದನಾ ವೆಚ್ಚವು ಅವರಿಗೆ ದಕ್ಕುವುದಿಲ್ಲ. ಆದ್ದರಿಂದ ಬೆಳೆದಂತಹ ಬೆಳೆಗೆ ಸೂಕ್ತ ಬೆಲೆ ನಿಗದಿಗೊಳಿಸಲು ಹಗೂ ಸ್ಥಿರ ಆದಾಯದ ಮೂಲಕ ಜೀವನ ಭದ್ರತೆ ಸಿಗುವಂತಾಗಲು ಕೃಷಿ ಬೆಲೆ ಆಯೋಗವನ್ನು ರಚಿಸಲಾಯಿತು. ಈ ಆಯೋಗವು ರೈತರು, ಕೃಷಿ ತಜ್ಞರು ಹಾಗೂ ಆರ್ಥಿಕ ತಜ್ಞರನ್ನು ಒಳಗೊಂಡಿದೆ. ಆಯೋಗವು ವೈಜ್ಞಾನಿಕವಾಗಿ ಅಧ್ಯಯನ ಮಾಡಿ, ಮಾಡುವ ಶಿಫಾರಸ್ಸುಗಳನ್ನು ಆಧರಿಸಿ ಸರ್ಕಾರವು ಸೂಕ್ತ ಬೆಲೆಯನ್ನು ನಿಗದಿಪಡಿಸುತ್ತದೆ.

ದೃಷ್ಟಿಕೋನ:

ರೈತರಿಗೆ ಗ್ರಾಹಕರ ಬೆಲೆಯಲ್ಲಿ ಗರಿಷ್ಠ ಪಾಲು ಖಚಿತ ಪಡಿಸುವುದು, ರಾಜ್ಯದ ಕೃಷಿ ಕ್ಷೇತ್ರದಲ್ಲಿ ಸುಸ್ಥಿರ ಅಭಿವೃದ್ಧಿ ಸಾಧನೆ, ಆಹಾರ ಭದ್ರತಾ ಅಗತ್ಯಗಳ ಪೂರೈಕೆ, ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಮತ್ತು ಸೂಕ್ತ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸುವುದು ಇತ್ಯಾದಿ ಕರ್ನಾಟಕ ಕೃಷಿ ಬೆಲೆ ಆಯೋಗದ ಮುಖ್ಯ ದೃಷ್ಟಿಕೋನವಾಗಿರುತ್ತದೆ.

ಧ್ಯೇಯ:

ಕೃಷಿ ಮಾರುಕಟ್ಟೆಯ ಮೂಲ ಸೌಕರ್ಯವನ್ನು ಉತ್ತಮಗೊಳಿಸುವುದು, ಬೆಲೆ ಮತ್ತು ಬಲೆಯೇತರ ಕ್ರಮಗಳಿಂದ ಮಾರುಕಟ್ಟೆ ಸ್ಥಿರೀಕರಿಸುವುದು, ಅಧಿಕ ಉತ್ಪಾದನೆ ಸಮಯದಲ್ಲಿ ‘ಮಾರುಕಟ್ಟೆ ಮಧ್ಯ ಪ್ರವೇಶ’, ರೈತರಿಗೆ ಲಾಭದಾಯಕ ಬೆಳೆ ಪಡೆಯುವುದಕ್ಕಾಗಿ ಸಾಮೂಹಿಕ ಚೌಕಾಸಿ ಸಾಮಥ್ರ್ಯ ಹೆಚ್ಚಿಸುವುದು, ಮಾರುಕಟ್ಟೆ ಸುಧಾರಣೆ, ಬೆಳೆ ವಿಮೆ, ಇ-ವ್ಯಾಪಾರಗಳ ಮೂಲಕ ಕೃಷಿ ಸಮುದಾಯದ ಎಲ್ಲಾ ವರ್ಗ ಮತ್ತು ಪ್ರದೇಶಗಳ ರೈತರ ಹಿತ ಕಾಪಾಡುವುದು ಮುಖ್ಯ ಧ್ಯೇಯೋದ್ಧೇಶವಾಗಿರುತ್ತದೆ.

ಅದರಂತೆ ಕರ್ನಾಟಕ ಸರ್ಕಾರದ ಕೃಷಿ ಬೆಲೆ ಆಯೋಗ ಪ್ರಾಯೋಜಿತ “ರೈತರ ಆದಾಯ ಹಾಗೂ ಕಲ್ಯಾಣ ವೃದ್ಧಿ ಯೋಜನೆ”ಯನ್ನು ಆಯ್ದ 8 ಜಿಲ್ಲೆಗಳ ಕೃಷಿ ವಿಜ್ಞಾನ ಕೇಂದ್ರದಲ್ಲಿನ ಒಂದು ಗ್ರಾಮದಲ್ಲಿ ಆಯೋಜಿಸಲಾಯಿತು. ಇದರಲ್ಲಿ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್., ಭಾ.ಕೃ.ಅ.ಪ - ಕೃಷಿ ವಿಜ್ಞಾನ ಕೇಂದ್ರ, ದ.ಕ., ಮಂಗಳೂರು ಇದರ ಅಡಿಯಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ತಾಲೂಕಿನ “ದರೆಗುಡ್ಡೆ”ಯನ್ನು 2017-2019 ಸಾಲಿನಲ್ಲಿ ಅಧ್ಯಯನಕ್ಕಾಗಿ ಆಯ್ಕೆಮಾಡಿಕೊಳ್ಳಲಾಯಿತು.

ದರೆಗುಡ್ಡೆಯು ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ತಾಲೂಕಿನ ಒಂದು ಹಳ್ಳಿ. ಇದು ಮಂಗಳೂರಿನಿಂದ 50 ಕಿ. ಮೀ. ದೂರದಲ್ಲಿದೆ. ಎಲ್ಲಾ ಸಮುದಾಯದ ರೈತರನ್ನೊಳಗೊಂಡ ಏಕೈಕ ಗ್ರಾಮವಾದುದರಿಂದ ದರೆಗುಡ್ಡೆಯನ್ನು ಈ ಅಧ್ಯಯನಕ್ಕಾಗಿ ಆಯ್ಕೆಮಾಡಿಕೊಳ್ಳಲಾಯಿತು. ಆದಾಯವನ್ನು ದ್ವಿಗುಣಗೊಳಿಸುವಲ್ಲಿ, ತಮ್ಮ ಜಮೀನಿನಲ್ಲಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಆಸಕ್ತರಿರುವ 25 ರೈತರನ್ನು ಕೃಷಿ ಬೆಲೆ ಆಯೋಗದ ಎಲ್ಲಾ ನಿಯಮಗಳನ್ನು ಅನುಸರಿಸಿ ಆಯ್ಕೆ ಮಾಡಲಾಯಿತು

 

“ರೈತರ ಆದಾಯ ಹಾಗೂ ಕಲ್ಯಾಣಭಿವೃದ್ಧಿ ಯೋಜನೆ”ಪ್ರಗತಿ ವರದಿ 2016-20 (click here to View More)